Connect with us
Loading...
Loading...

ಅಂಕಣ

ಸರ್ದಾರ್ ಪಟೇಲರ ಮೂರ್ತಿ ಪ್ರತಿಷ್ಟಾಪನೆಗೆ 3 ಸಾವಿರ ಕೋಟಿಯಾದರೆ ನೆಹರು, ಇಂದಿರಾ, ರಾಜೀವ್ ಗಾಂಧಿಯ ಜಾಗ ಎಷ್ಟು ಲಕ್ಷ ಕೋಟಿ ಬೆಲೆಬಾಳುತ್ತೆ ಗೊತ್ತಾ?

Published

on

  • 3K
  •  
  •  
  •  
  •  
  •  
  •  
  •  
    3K
    Shares

ಸರ್ದಾರ್ ವಲ್ಲಭಭಾಯಿ ಪಟೇಲರ ಮೂರ್ತಿಯನ್ನ ಗುಜರಾತಿನಲ್ಲಿ ಪ್ರತಿಷ್ಠಾಪಿಸಲಾಗಿದೆ, ಇಂದು ಅಂದರೆ ಅಕ್ಟೋಬರ್ 31 ರಂದು ಪಟೇಲರ ಜನ್ಮದಿನದಂದೇ ಪಟೇಲರ ಭವ್ಯ ಮೂರ್ತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿ ದೇಶದ ಜನರಿಗೆ ಸಮರ್ಪಿಸಿದ್ದಾರೆ.

ಸರ್ದಾರ್ ಪಟೇಲರ ಈ ಮೂರ್ತಿಯು ವಿಶ್ವದ ಅತಿ ಎತ್ತರದ ಮೂರ್ತಿಯಾಗಿದ್ದು ಈ ಮೂರ್ತಿ ಪ್ರತಿಷ್ಟಾಪನೆಯಿಂದ ದೇಶಕ್ಕೆ ಸಾಕಷ್ಟು ಲಾಭವಾಗಲಿದೆ. ಈ ಮೂರ್ತಿಯು ಇದೀಗ ವರ್ಲ್ಡ್ ರೆಕಾರ್ಡ್ ಆಗಿದ್ದು ಇದನ್ನ ಕೇವಲ ಭಾರತದಿಂದಷ್ಟೇ ಅಲ್ಲದೆ ದೇಶ ವಿದೇಶಗಳಿಂದ ನೋಡಲು ಪ್ರವಾಸಿಗರು ಬರಲಿದ್ದಾರೆ. ಇದರಿಂದ ಗುಜರಾತಿನ ಜನಕ್ಕೆ ಪ್ರವಾಸೋದ್ಯಮದ ಮೂಲಕ‌ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯಲಿವೆ.

ಕೆಲವೇ ದಿನಗಳಲ್ಲಿ ಈ ಪ್ರದೇಶದಲ್ಲಿ ಬನವ್ಯ ಹೋಟೆಲ್ ಗಳು, ರೆಸ್ಟೋರೆಂಟ್ ಗಳು ತಲೆಯೆತ್ತಲಿವೆ. ಪ್ರವಾಸೋದ್ಯಮ ದೃಷ್ಟಿಯಿಂದ ನೋಡಿದರೆ ಇಲ್ಲಿ ಬರುವ ಪ್ರವಾಸಿಗರಿಂದ ಸ್ಥಳೀಯ ಜನರಿಗೆ ವಿಪುಲ ಉದ್ಯೋಗಾವಕಾಶಗಳು ಸಿಗಲಿವೆ. ಕೇವಲ ಈ ಮೂರ್ತಿಯೊಂದರಿಂದಲೇ ಲಕ್ಷಾಂತರ ಜನರ ಜೀವನ ಸಾಗಲಿದೆ. ಈ ಮೂರ್ತಿಯನ್ನ ತಯಾರಿಸಲು ಸರಿಸುಮಾರು 3 ಸಾವಿರ ಕೋಟಿಯಷ್ಟು ಹಣವನ್ನ ಖರ್ಚು ಮಾಡಲಾಗಿದೆ ಅದೂ ಕೇವಲ ಮೂರೇ ವರ್ಷಗಳ ಸತತ ಕಠಿಣ ಪರಿಶ್ರಮದ ಮೂಲಕ.

ಸರ್ದಾರ್ ಪಟೇಲರ ಈ ಮೂರ್ತಿಯಿಂದ ಚೀನಾ ಹಾಗು ಪಾಕಿಸ್ತಾನದ ಹೊಟ್ಟೆಗೆ ಬೆಂಕಿ ಬಿದ್ದಂತಹ ಅನುಭವವಾಗಿರೋದಂತೂ ಸುಳ್ಳಲ್ಲ. ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷ ಹಾಗು ಎಡಪಂಥೀಯ ಮಾನಸಿಕತೆಯ ಜನರಿಗೂ ಪಟೇಲರ ಈ ಮೂರ್ತಿಯನ್ನ ನೋಡಿ ದಂಗಾಗಿದ್ದಾರೆ. ನರೇಂದ್ರ ಮೋದಿಯವರನ್ನ ವಿರೋಧಿಸಲೇಬೇಕು ಅನ್ನೋ ಕಾರಣಕ್ಕೆ ಕಾಂಗ್ರೆಸ್ ಹಾಗು ಎಡಪಂಥೀಯ ಮಾನಸಿಕತೆಯ ಜನ ಈಗ ಈ ಮೂರ್ತಿಗೆ 3 ಸಾವಿರ ಕೋಟಿ ಹಣ ವ್ಯಯಿಸುವ ಬದಲು ಅದೇ ಹಣದಿಂದ ಆಸ್ಪತ್ರೆ, ಶಾಲೆ ಕಟ್ಟಿಸಬಹುದಾಗಿತ್ತು ಎಂದು ಬಾಯಿ ಬಾಯಿ ಬಡಿದುಕೊಳ್ಳಿತ್ತಿದ್ದಾರೆ‌.

ಕೆಲವರು ಮೋದಿ 3 ಸಾವಿರ ಕೋಟಿ ಲೀಟಿ ಮಾಡಿಬಿಟ್ಟರು ಎಂದು ಹೇಳಿತ್ತಿದ್ದರೆ ಎಡಪಂಥೀಯರಿಗಂತೂ ಈ ಮೂರ್ತಿಯಿಂದ ಈ ಪ್ರದೇಶದಲ್ಲಿ ಅದೆಷ್ಟು ಉದ್ಯೋಗ ಸೃಷ್ಟಿಯಾಗಲಿವೆ ಅನ್ನೋದನ್ನ ಕೂಡ ಅಂದಾಜು ಮಾಡಲಾಗುತ್ತಿಲ್ಲ. ಆದರೆ

ದೆಹಲಿಯಲ್ಲಿ ನೆಹರು, ಇಂದಿರಾಗಾಂಧಿ ಹಾಗು ರಾಜೀವ್ ಗಾಂಧಿಯ ಸ್ಮಾರಕಗಳಿವೆ, ದೆಹಲಿಯ ರಾಜಘಾಟ್ ಪ್ರದೇಶದಲ್ಲಿ ಮೂರು ಸ್ಮಾರಕಗಳಿವೆ ಹಾಗು ಈ ಮೂರೂ ಸ್ಮಾರಕಗಳಿಗಾಗಿ ನೂರಾರು ಎಕರೆ ಜಾಗವನ್ನ ವಶಪಡಿಸಿಕೊಳ್ಳಲಾಗಿದೆ‌. ಅಷ್ಟೇ ಅಲ್ಲದೆ ಈ ಮೂರೂ ಸ್ಮಾರಕಗಳಿತರುವ ಭೂಮಿಯ ಬೆಲೆ ಜಗತ್ತಿನ ಅತಿ ಹೆಚ್ಚು ಬೆಲೆ ಬಾಳುವ ಜಾಗವಾಗಿವೆ. ನಿಮಗೆ ಈ ವಿಷ್ಯ ಕೇಳಿ ದಂಗು ಬಡಿಯಬಹುದು, ಕೇವಲ ನೆಹರು, ಇಂದಿರಾ ಹಾಗು ರಾಜೀವ್ ಗಾಂಧಿಯ ಸ್ಮಾರಕಗಳಿರುವ ಜಾಗದ ಬೆಲೆಯೇ ಹತ್ತಿರತ್ತಿರ 3 ಲಕ್ಷ ಕೋಟಿ ಬೆಲೆ ಬಾಳುತ್ತವೆ.

ಯಾರಿಗೆ 3 ಸಾವಿರ ಕೋಟಿಯ ಸರ್ದಾರ್ ಪಟೇಲರ ಮೂರ್ತಿಯ ಬಗ್ಗೆ ಅಸಮಾಧಾನವಿದೆಯೋ ಅಂಥ ಜನರು ದೆಹಲಿಯಲ್ಲಿನ ಇಂದಿರಾ, ರಾಜೀವ್ ಹಾಗು ನೆಹರುವಿನ ಸ್ಮಾರಕಗಳಿರುವ ಜಾಗಗಳನ್ನ ಮಾರಾಟ ಮಾಡಿಸಬೇಕು ನೋಡಿ. ಈ ಸ್ಮಾರಕಗಳು ಬರೋಬ್ಬರಿ 3 ಲಕ್ಷ ಕೋಟಿ ಬೆಲೆ ಬಾಳುವ ಜಾಗವಾಗಿವೆ. ಗಾಂಧಿ ಪರಿವಾರ ಈ ಮೂರು ಲಕ್ಷ ಕೋಟಿ ಬೆಲೆಬಾಳುವ ಜಾಗವನ್ನ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಸರ್ದಾರ್ ಪಟೇಲರ ಮೂರ್ತಿಗೆ ಖರ್ಚು ಮಾಡಿದ 3 ಸಾವಿರ ಕೋಟಿ ಹಣದಿಂದ ಆಸ್ಪತ್ರೆ, ಶಾಲೆ ಕಟ್ಟಿಸಬಹುದಿತ್ತು ಎಂಬ ಬಿಟ್ಟಿ ಸಲಹೆ ನೀಡುವ ಎಡಬಿಡಂಗಿಗಳು ಗಾಂಧಿ ಫ್ಯಾಮಿಲಿಯ ವಶದಲ್ಲಿರುವ ಈ ಬೆಲೆ ಬಾಳುವ ಜಾಗಗಳನ್ನ ಮಾರಿ ದೇಶಕ್ಕಾಗಿ ತಮಗೆ ಬೇಕಾದ್ದನ್ನ ಮಾಡಿಕೊಳ್ಳುವ ವಿಪುಲ ಅವಕಾಶಗಳಿವೆ.

ಸರ್ದಾರ್ ಪಟೇಲರ ಮೂರ್ತಿಯಿಂದ ಸ್ಥಳೀಯ ಜನರಿಗೆ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿವೆ ಆದರೆ ಗಾಂಧಿ ಪರಿವಾರದ ಈ ಸ್ಮಾರಕಗಳಿಂದ ಏನು ಲಾಭವಿದೆ? ಲಾಭವಂತೂ ಎಳ್ಳಷ್ಟೂ ಇಲ್ಲ ಆದರೆ ಪ್ರತಿ ವರ್ಷ ಈ ಸ್ಮಾರಕಗಳಿಗೆ ಭಾರತ ಸರ್ಕಾರದಿಂದಲೇ ಕೋಟ್ಯಾಂತರ ರೂಪಾಯಿಗಳನ್ನ ಹಾಳು ಮಾಡಲಾಗುತ್ತಿದೆ. ಪಟೇಲರ ಮೂರ್ತಿಯ ವಿರುದ್ಧ ಮಾತನಾಡುವವರು ಸ್ವಲ್ಪ ದೆಹಲಿಯಲ್ಲಿನ ಈ ಸ್ಮಾರಕಗಳ ಲಕ್ಷಾಂತರ ಕೋಟಿ ಬೆಲೆ ಬಾಳುವ ಜಾಗಗಳ ಬಗ್ಗೆಯೂ ಧ್ವನಿಯೆತ್ತಬೇಕಾಗಿ ವಿನಂತಿ.

– Team Nationalist Views

Nationalist Views ©2018 Copyrights Reserved

  •  
    3K
    Shares
  • 3K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com