Connect with us
Loading...
Loading...

ಅಂಕಣ

ಹಿಂದುತ್ವದ ಕುರಿತು ಚೀನಾ ಇಂಥಾ ಹೇಳಿಕೆ ಕೊಡುತ್ತಂತ ಯಾರೂ ಊಹಿಸಿರಲಿಲ್ಲ; ಭಾರತದಲ್ಲಿನ ಸೆಕ್ಯೂಲರ್ ಗಳಿಗೆ ಬರ್ನಾಲ್ ಕೊಡ್ರಪ್ಪೋ

Published

on

  • 10K
  •  
  •  
  •  
  •  
  •  
  •  
  •  
    10K
    Shares

ಭಾರತದಲ್ಲಿ ವಾಮಪಂಥೀಯ ಕಮ್ಯುನಿಸ್ಟರು ದಿನಬೆಳಗಾದರೆ ಹಿಂದುತ್ವವನ್ನ ಅಪಮಾನಗೊಳಿಸುವ ಕಾರ್ಯದಲ್ಲೇ ನಿರತರಾಗಿರುತ್ತಾರೆ ಆದರೆ ಭಾರತೀಯ ಕಮ್ಯುನಿಸ್ಟರ ಅಪ್ಪ ಚೀನಾ ಮಾತ್ರ ಹಿಂದುತ್ವದ ಕುರಿತಾಗಿ ಬೇರೆಯದ್ದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಜಾಗು ಭಾರತದಲ್ಲಿನ ಹಿಂದುತ್ವವಿದೆ ಎಂಬ ಕಾರಣಕ್ಕೇ ಚೀನೀ ಮೀಡಿಯಾ ಒಂದು ಗೌರವ ಸೂಚಕ ಪದವನ್ನ ಬಳಸುತ್ತ “ಹಿಂದುತ್ವಕ್ಕೆ ಧನ್ಯವಾದ” ಎಂದಿದೆ.

ಚೀನೀ ಮೀಡಿಯಾ ಒಂದರ ಪ್ರಕಾರ ಭಾರತದಲ್ಕಿ ಒಂದು ವೇಳೆ ಹಿಂದುತ್ವ ಇರದೇ ಹೋಗಿದ್ದರೆ ಭಾರತವೂ ಸಿರಿಯಾ, ಇರಾಕ್ ನಂತಹ ದರಿದ್ರ ಪರಿಸ್ಥಿಯನ್ನ ಎದುರಿಸುತ್ತಿರುತ್ತಿತ್ತು, ಭಾರತದಲ್ಲಿ ಕಟ್ಟರಪಂಥೀಯ ಇಸ್ಲಾಂ ಇರುತ್ತಿತ್ತು, ಭಯೋತ್ಪಾದಕರ ಫ್ಯಾಕ್ಟರಿಯೇ ಭಾರತದಲ್ಲಿರುತ್ತಿತ್ತು ಹಾಗು ಒಂದು ಇಂಥಾ ದೇಶ ಚೀನಾದ ಪಕ್ಕದ ರಾಷ್ಟ್ರವಾಗಿದ್ದಕ್ಕೆ ಚೀನಾಗೆ ಸದಾ ಉಗ್ರರ ವಿರುದ್ಧ ಸೆಣೆಸುತ್ತಿರಬೇಕಾದ ಪರಿಸ್ಥಿತಿ ಇರುತ್ತಿತ್ತು, ಥ್ಯಾಂಕ್ ಗಾಡ್ ಭಾರತದಲ್ಲಿ ಹಿಂದುತ್ವವಿದೆ ಹಾಗಾಗಿಯೇ ಕಟ್ಟರಪಂಥೀಯ ಇಸ್ಲಾಮಿನ ಕೂಪಕ್ಕೆ ಭಾರತ ಬಿದ್ದಿಲ್ಲ ಚೀನಾದ ಸುಪ್ರಸಿದ್ಧ ಪತ್ರಿಕೆಯೊಂದು ಹೇಳಿದೆ.

ಚೀನಾದ ಪ್ರಖ್ಯಾತ ಪತ್ರಿಕೆಯೊಂದರ ಪ್ರಕಾರ ಹಿಂದುತ್ವವಿರುವ ಕಾರಣಕ್ಕಾಗಿಯೇ ಭಾರತವಿದೆ ಇಲ್ಲವಾದರೆ ಭಾರತ ಯಾವತ್ತೋ ಇಸ್ಲಾಮಿಕ್ ಭಯೋತ್ಪಾದನೆ ಹಾಗು ಜಿಹಾದಿಗಳ ಭಯೋತ್ಪಾದಕರ ಫ್ಯಾಕ್ಟರಿಯಾಗಿ ಪರಿವರ್ತಿತವಾಗಿರುತ್ತಿತ್ತು ಎಂದು ಹೇಳಿದೆ. ಚೀನಾ ದೇಶವು ಹಿಂದುತ್ವದ ಕುರಿತಾಗಿ ತನ್ನ ಸರ್ಕಾರಿ ಪತ್ರಿಕೆಯಾದ ಗ್ಲೋಬಲ್ ಟೈಮ್ಸ್ ನಲ್ಲಿ ಅಂಕಣ ಒಂದನ್ನ ಬರೆದಿದೆ. ಗ್ಲೋಬಲ್ ಟೈಮ್ಸ್ ಚೀನಾದ ಅತಿ ದೊಡ್ಡ ಸರ್ಕಾರಿ ಪತ್ರಿಕೆಯಾಗಿದ್ದು ಇದರ ಸರ್ಕ್ಯೂಲೇಷನ್ ಚೀನಾದಲ್ಲಿ ಕೋಟ್ಯಾಂತರ ಜನರಿಗೆ ಮುಟ್ಟುವಷ್ಟಿದೆ.

ಚೀನಾ ಪತ್ರಿಕೆ ಗ್ಲೋಬಲ್ ಟೈಮ್ಸ್ ನಲ್ಲಿ ಹೀಗೆ ಬರೆದಿದೆ “ಭಾರತದಲ್ಲಿ ಮುಸಲ್ಮಾನರ ಅತ್ಯಧಿಕ ಜನಸಂಖ್ಯೆಯಿದೆ ಆದರೂ ಭಾರತವು ಅನ್ಯ ಮುಸ್ಲಿಂ ಬಾಹುಳ್ಯ ದೇಶಗಳಿಗೆ ಹೋಲಿಸಿದರೆ ಬಹಳ ಸುರಕ್ಷಿತ ದೇಶವಾಗಿದೆ. ಥೈಲ್ಯಾಂಡ್ ನ ದಕ್ಷಿಣ ಭಾಗದಲ್ಲಿ ಪ್ರತಿ ವಾರವೂ ಭಯೋತ್ಪಾದಕ ಕೃತ್ಯಗಳು ನಡೆಯುತ್ತಲೇ ಇರುತ್ತವೆ, ಫಿಲಿಪೈನ್ಸ್ ನ ದಕ್ಷಿಣ ಭಾಗವಂತೂ ISIS ನ ಭದ್ರಕೋಟೆಯಾಗಿ ಪರಿವರ್ತಿತವಾಗಿದೆ. ಭಾರತಕ್ಕೆ ಹೋಲಿಸಿದರೆ ಈ ದೇಶಗಳಲ್ಲಿ ಮುಸ್ಲಿಮರ ಜನಸಂಖ್ಯೆ ಕಡಿಮೆಯಿದೆ ಆದರೂ ಭಯೋತ್ಪಾದಕರ ಅಡ್ಡೆಯಾಗಿ ಬದಲಾಗಿವೆ” ಎಂದು ಬರೆದಿದೆ.

ಗ್ಲೋಬಲ್ ಟೈಮ್ಸ್ ಪತ್ರಿಕೆಯ ಅಂಕಣದಲ್ಲಿ ಮುಂದೆ “ಭಾರತದಲ್ಲಿ ಹಿಂದುತ್ವವಿದೆ ಹಾಗು ಇದೇ ಕಾರಣದಿಂದ ಅನ್ಯರಾಷ್ಟ್ರಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿ ಹೇಗೆ ಇಸ್ಲಾಮಿಕ್ ಭಯೋತ್ಪಾದನೆ ಹೆಚ್ಚುತ್ತಿದೆಯೋ ಆ ರೀತಿಯಲ್ಲಿ ಕಟ್ಟರಪಂಥೀಯ ಇಸ್ಲಾಂ ಭಾರತದಲ್ಲಿ ಹಬ್ಬಿಲ್ಲ. ಹಿಂದುತ್ವದ ಕಾರಣದಿಂದಲೇ ಭಾರತದಲ್ಲಿ ಮುಸಲ್ಮಾನರು ಕಂಟ್ರೋಲ್ ನಲ್ಲಿದ್ದಾರೆ” ಎಂದು ಹೇಳಿದೆ.

ಚೀನಿ ಮೀಡಿಯಾದ ಈ ಅಂಕಣದಲ್ಲಿ ಸ್ಪಷ್ಟವಾಗಿ ಹೇಳಿರುವ ವಿಷಯವೆಂದರೆ ಒಂದು ವೇಳೆ ಭಾರತದಲ್ಲಿ ಹಿಂದೂ ಧರ್ಮವಿರದಿದ್ದರೆ ಭಾರತೀಯ ಮುಸಲ್ಮಾನರು ಕಂಟ್ರೋಲ್ ನಲ್ಲೇ ಇರುತ್ತಿರಲಿಲ್ಲ ಹಾಗು ಭಾರತದಲ್ಲೂ ಕೂಡ ISIS ನಂತಹ ಪರಿಸ್ಥಿತಿ ಉದ್ಭವಿಸಿರುತ್ತಿತ್ತು, ಹಿಂದುತ್ವದ ಕಾರಣದಿಂದಲೇ ISIS ನಂತಹ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿಲ್ಲ ಎಂದು ಹೇಳಿದೆ.

ಚೀನಾ ಮೀಡಿಯಾ ಹೇಳುತ್ತಿರುವ ಈ ಅಂಕಣದಿಂದ ಸ್ಪಷ್ಟವಾಗಿ ಗೊತ್ತಾಗುವ ಅಂಶವೇನೆಂದರೆ ಭಾರತದಲ್ಲಿ ಹಿಂದುತ್ವ ವಿರುವ ಕಾರಣದಿಂದಲೇ ISIS ನಂತಹ ಇಸ್ಲಾಮಿಕ್ ಕಟ್ಟರಪಂಥೀಯ ಮುಸಲ್ಮಾನರು ಭಾರತದಲ್ಲಿಲ್ಲ ಆದರೆ ಭಾರತದಲ್ಲಿನ ಸೆಕ್ಯೂಲರ್ ಗಳು, ಕಮ್ಯುನಿಸ್ಟರು ಮಾತ್ರ ಹಿಂದುತ್ವವನ್ನ ಮುಗಿಸಿಬಿಡಲು ಸಂಚು ರೂಪಿಸುತ್ತ ದಿನಬೆಳಗೆದ್ದರೆ ಸಾಕು ಹಿಂದುತ್ವದ ವಿರುದ್ಧವೇ ತಮ್ಮ ಅಭಿಯಾನಗಳನ್ನ ಮಾಡುತ್ತಿರುತ್ತಾರೆ. ಒಂದು ವೇಳೆ ಭಾರತದಲ್ಲಿ ಹಿಂದೂ ಧರ್ಮ ನಾಶವಾದರೆ ಭಾರತದ ಸ್ಥಿತಿ ಏನಾಗಬಹುದಂತ ಯೋಚಿಸಿ.

ಭಾರತದ ಕಮ್ತುನಿಸ್ಟರು ಭಾರತದಲ್ಲಿ ಹಿಂದುತ್ವವನ್ನ ಮುಗಿಸುವ‌ ಹುನ್ನಾರ ನಡೆಸಿದ್ದಾರೆ. ಭಾರತದಲ್ಲಿ ಹಿಂದುತ್ವದ ಅಸ್ತಿತ್ವ ಮುಗಿದರೆ ಮಾತ್ರ ಘಜವಾ-ಎ-ಹಿಂದ್ ಮಾಡಬಹುದು,ಮ ಹಾಗು ಭಾರತದಲ್ಲೂ ISIS ನೆಲೆಗೊಳ್ಳುವಂತೆ ಮಾಡಬಹುದು ಅನ್ನೋದು ಜಿಹಾದಿಗಳ ಸ್ಪಷ್ಟವಾಗಿ ಗೊತ್ತಿದೆ. ಆದರೆ ಇದನ್ನ ಮಾಡೋಕೆ ಮಾತ್ರ ಯಾವ ಜಿಹಾದಿಯಿಂದಲೂ ಆಗಿಲ್ಲ ಆಗೋದೂ ಇಲ್ಲ. ಇದೇ ಕಾರಣಕ್ಕೇ ಅಲ್ಲವೇ ಭಾರತದ ಮೇಲೆ ಮೊಘಲರು, ತುರ್ಕರು, ಅರಬರು ದಾಳಿ ನಡೆಸಿಯೂ ಭಾರತವನ್ನ ಇಸ್ಲಾಮೀಕರಣ ಮಾಡದೆ ಸೋಲೊಪ್ಪಿಕೊಂಡಿದ್ದು.

ಭಾರತೀಯ ಕಮ್ಯುನಿಸ್ಟರ ಅಪ್ಪ ಚೀನಾ ಒಂದಯ ಕಡೆ ಭಾರತದಲ್ಲಿನ ಹಿಂದುತ್ವವನ್ನ ಹಾಡಿ ಹೊಗಳುತ್ತಿದ್ದರೆ ಇತ್ತ ಚೀನಾದ ಮಾನಸಪುತ್ರರಾದ ಕಮ್ಯುನಿಸ್ಟರು ಹಿಂದುತ್ವವನ್ನ ಮುಗಿಸಿಬಿಡುತ್ತೇವೆ ಅಂತ ಬೊಬ್ಬೆಯಿಡುತ್ತಿದ್ದಾರೆ‌.

ನೆನ್ನೆ ಕೇರಳದ ಮುಖ್ಯಮಂತ್ರಿ, ಚೀನಾದ ಮಾನಸಪುತ್ರ ಪಿಣರಾಯಿ ವಿಜಯನ್ ಸುದ್ದಿಗೋಷ್ಟಿಯನ್ನ ಕೇಳುತ್ತಿದ್ದೆ, ಅದರಲ್ಲಿ ಆತ ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ತಡೆದದ್ದು ಆರೆಸ್ಸೆಸ್, ಸಂಘ ಪರಿವಾರದವರು ಎಂದು ಬಾಯಿ ಬಾಯಿ ಬಡ್ಕೊಳ್ತಿದ್ದ. ಆತ ಒಮ್ಮೆ ತನ್ನ ಕನ್ಯುನಿಸ್ಟ್ ತಂದೆ ಚೀನಾ ಹಿಂದುತ್ವದ ಕುರಿತು ಏನ್ ಹೇಳಿದೆ ಅನ್ನೋದನ್ನ ಓದಲೇಬೇಕು. ಆಗಲಾದರೂ ಹಿಂದುತ್ವದ ಮಹತ್ವ ಅರಿಯಬಹುದೇನೋ.

– Team Nationalist Views

Nationalist Views ©2018 Copyrights Reserved

  •  
    10K
    Shares
  • 10K
  •  
  •  
  •  
  •  
  •  
  •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com